Accident|ಇಂದು ಮುಂಜಾನೆ ಕಾರು, ಬೈಕ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಏಳು ಜನ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ದಾಬಸ್ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದ್ದು ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕಾರಿನಲ್ಲಿರುವ ಆರು ಜನ ಹಾಗೂ ಬೈಕ್ ಸವಾರ ಸೇರಿ ಏಳು ಜನ ಸಾವನ್ನಪ್ಪಿದ್ದಾರೆ.
ಅಪಘಾತದ ಭೀಕರತೆ ಭಯ ಹುಟ್ಟಿಸುವ ಹಾಗಿದೆ, ಕಾರು ಬೈಕ್ ನುಜ್ಜು ಗುಜ್ಜಾಗಿದ್ದು ಕ್ಯಾಂಟರ್ ನ ವೀಲ್ ಕಿತ್ತು ಬಂದಿದೆ.
XUV ಕಾರಿನಲ್ಲಿದ್ದ ಅಯಾನ್, ಅಲಿ, ಅಶ್ವಿನ್ ಹಾಗೂ ಭರತ್ ಹಾಗೂ ಬೈಕ್ ಸವಾರ ಗಗನ ಮೃತ ಪಟ್ಟ ದುದೈವಿಗಳು.
ಕಾರಿನಲ್ಲಿರುವ ನಾಲ್ವರು ಕಾಲೇಜು ವಿದ್ಯಾಥಿಗಳಾಗಿದ್ದು ಬೆಂಗಳೂರಿನ ಕೊತ್ತನೂರಿನ ನಿವಾಸಿಗಳು ಎಂದು ತಿಳಿದುಬಂದಿದೆ. ಇನ್ನೂ ಬೈಕ್ ಸವಾರ ದೇವನಹಳ್ಳಿಯ ತಿಂಡ್ಲೂರು ನಿವಾಸಿ ಎಂದು ತಿಳಿದುಬಂದಿದೆ.
ಅತಿ ವೇಗದ ಚಾಲನೆಯೆ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದೇವನಹಳ್ಳಿ ಪೋಲಿಸರು ದೌಡಾಯಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ,
