ಸಿದ್ದಾಪುರ ವಸಂತ ನಾಯ್ಕ್ ಕೊಲೆ ನಡೆದು ನಾಲ್ಕುದಿನ ಕಳೆದಿದೆ. ಕೊಲೆ ಆರೋಪಿಗಳಾದ ಕಮಲಾಕರ ಭಟ್ ಹಾಗೂ ಸುಚಿತ್ರಾ ಸೇರಿದಂತೆ ಆರು ಜನ ಜೈಲು ಪಾಲಾಗಿದ್ದಾರೆ.

ಈ ಕೊಲೆ ಸಂಚಿನ ಹಿಂದೆ ಇನ್ನೂ ಯಾರಾದರೂ ಇದ್ದಾರಾ ಎಂಬ ಆಯಾಮಾದಲ್ಲಿ ತನಿಖೆ ನಡೆಸುತ್ತಿರುವ ಪೋಲಿಸರಿಗೆ ಅಚ್ಚರಿಯ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಕೊಲೆ ಆರೋಪಿ ಮೃತ ವಸಂತನ ತಮ್ಮ ಮಹೇಶನ ಪತ್ನಿ ಸುಚಿತ್ರಾ ಜೊತೆಗೆ ದೂರವಾಣಿ ಸಂಪರ್ಕದಲ್ಲಿರುವ ಅನೇಕ ಯುವಕರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ನಡೆಯುವ ಪೂರ್ವದಲ್ಲೇ ಅಂದರೆ ಸುಮಾರು ಮೂರು ವರ್ಷಗಳ ಹಿಂದೇ ಸುಮಿತ್ರಾ ಹಾಗೂ ಮಹೇಶ ದಂಪತಿಗಳ ಸಂಸಾರದಲ್ಲಿ ಬಿರುಕು ಮೂಡಿತ್ತು. ಈ ವೈಮನಸ್ಸಿಗೆ ಪ್ರಮುಖ ಕಾರಣ ” ಪತ್ನಿ ಸುಚಿತ್ರಾ ಯಾವಾಗಲೂ ದೂರವಾಣಿಯಲ್ಲೇ ಯಾರ್ಯಾರೋ ಹುಡುಗರ ಜೊತೆಗೆ ಕಾಲಹರಣ ಮಾಡಿತ್ತಾಳೆ, ಹಾಗೂ ಉದ್ಯೋಗದ ನಿಮಿತ್ತ ನಾನು ಬೆಂಗಳೂರಿಗೆ ಹೋದಾಗ ನಮ್ಮ ಮನೆಗೆ ಚರಣ ಬಸಪ್ಪ ಹಾಗೂ ಪ್ರಕಾಶ ಎಂಬ ಯುವಕರು ಸೇರಿದಂತೆ ನೇಕ ಅಪರಿಚಿತ ಯುವಕರು ಬರುತ್ತಾರೆ” ಎಂದು ಸುಚಿತ್ರಾ ಪತಿ ಮಹೇಶ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.

ರೀಲ್ಸ್ ರಾಣಿ ಸುಚಿತ್ರಾ ತನ್ನ ಮಾದಕ ಮೈಮಾಟದಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಇದ್ದಳು. ತನ್ನ ಬುಟ್ಟಿಗೆ ಬೀಳುವ ಯುವಕರ ಸಂಪರ್ಕ ಸಾಧಿಸಿ ಅವರಿಂದ ಹಣದ ಬೇಡಿಕೆಯನ್ನು ಇಡುತ್ತಿದ್ದಳು ಎಂಬ ಗುಸು ಗುಸು ಈಗ ಸಿದ್ದಾಪುರ ಪಟ್ಟಣದಲ್ಲಿ ಕೇಳಿಬರುತ್ತಿದೆ. ಸುಚಿತ್ರಾ ಪತಿ ಮಹೇಶನ ಮಾಧ್ಯಮ ಹೇಳಿಕೆ ನೋಡಿ ತನಿಖೆ ಆರಂಭಿಸಿದ ಪೊಲೀಸರು ಸುಚಿತ್ರಾ ಯಾರ ಯಾರ ಬಳಿ ದೂರವಾಣಿ ಸಂಪರ್ಕದಲ್ಲಿ ಇದ್ದಾಳೆ ಎಂಬ ಮಾಹಿತಿ ಕಲೆಹಾಕಿದ್ದಾರೆ.

ಅಚ್ಚರಿಯ ವಿಷಯವೆಂದರೆ ಸುಚಿತ್ರಾ ಜೊತೆಗೆ ದೂರವಾಣಿ ಸಂಪರ್ಕದಲ್ಲಿರುವ ಎಲ್ಲರೂ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಈ ವಿಚಾರವಾಗಿ ಮಾಧ್ಯಮದ ಜೊತೆಗೆ ಮಾತನಾಡಿದ ಉತ್ತರಕನ್ನಡ ಎಸ್‌.ಪಿ ದೀಪನ್ ಎಮ್.ಎನ್ ಹಣಕ್ಕಾಗಿ ಯುವಕರ ಬಳಿ ಬೇಡಿಕೆ ಇಟ್ಟ ಬಗ್ಗೆ ಈ ವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಂದೊಮ್ಮೆ ಬಂದರೆ ಆ ಆಯಾಮದಲ್ಲಿಯೂ ತನಿಖೆ ನಡೆಸಲಾಗುವುದು ಎಂದರು.