Karwar| ಕಾರು ಹಾಗೂ ರಿಕ್ಷಾ ನಡುವೆ ಅಪಘಾತ ಸಂಭವಿಸಿ, ರಿಕ್ಷಾ ಚಾಲಕ ಸಾವನ್ನಪ್ಪಿದ ಘಟನೆ ಇಲ್ಲಿನ ಮಾಜಾಳಿಯ ರಾಷ್ಟ್ರೀಯ ಹೆದ್ದಾರಿ-63 ಬಳಿ ನಡೆದಿದೆ.

ರಿಕ್ಷಾ ಚಾಲಕ ಪ್ರಮೋದ ಪೆಡ್ನೆಕರ್ ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಅತೀ ವೇಗದಲ್ಲಿದ್ದ ತಮಿಳುನಾಡು ನೋಂದಣಿಯ ಮಾರುತಿ ಬ್ರಿಜಾ ಕಾರ್ ( TN66 AV9897) ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಗುದ್ದಿದೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ರಸ್ತೆ ಮಧ್ಯೆಯೇ ಪಲ್ಟಿಯಾಗಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ರಿಕ್ಷಾ ಚಾಲಕ ಸಾವನ್ನಪ್ಪಿದ್ದಾನೆ. ಚಿತ್ತಾಕುಲ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
