ಬೇಲೇಕೇರಿ ಬಂದರು (Port) ಗೆ ಬರದಂತೆ ಮೀನು ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿದ ಇಬ್ಬರ ಮೇಲೆ ಅಂಕೋಲಾ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲೇಕೇರಿಯ ಸಚಿನ್‌ ರಾಧಾಕೃಷ್ಣ ಅಸ್ನೋಟಿಕರ್‌ ಈ ಬಗ್ಗೆ ಠಾಣೆಯಲ್ಲಿ ಬೇಲೇಕೇರಿಯ ಮಣಿಕಂಠ ಸುರೇಶ ಕುಡ್ತಳಕರ ಹಾಗೂ ಅಮೀತ್‌ ಕಾಂತಾ ಕುಡ್ತಳಕರ ಎಂಬಿಬ್ಬರ ದೂರು ದಾಖಲಿಸಿದ್ದಾರೆ. ತಾನು  ಬೇಲೆಕೇರಿಯ ಕರಿದೇವರ ದೇವಸ್ಥಾನದಲ್ಲಿ ಹೋಳಿ ಹಬ್ಬದ ಪೂರ್ವ ತಯಾರಿ ಸಭೆ ನಡೆಯುವಾಗ ಈ ಇಬ್ಬರು ಆರೋಪಿಗಳು  ಏಕಾಏಕಿ ಮಧ್ಯೆ ಪ್ರವೇಶಿಸಿ ತನ್ನ ಶರ್ಟನ ಕಾಲರ್ ಹಿಡಿದು ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೇ ಕೊರಳಿನಲ್ಲಿರುವ ಚಿನ್ನದ ಚೈನ್‌ ನ್ನು  ತುಂಡು ಮಾಡಿ, `ನೀನು ಬಂದರನಲ್ಲಿ ಕಾಣಿಸಿಕೊಂಡರೆ ನಿನಗೆ ಹೊಡೆದು ಜೀವ ತೆಗೆಯುತ್ತೇನೆ` ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿದ್ದಾನೆ.

ಆಗ ಗಲಾಟೆ ನೋಡಿ ಸಭೆಯಲ್ಲಿ ಕುಳಿತಿದ್ದ ಗುರುದಾಸ ಬಾನಾವಳಿಕರ ಸಮಾಧಾನ ಮಾಡುವಾಗ ಅವರಿಗೂ ಸಹ ಶರ್ಟ ಹಿಡಿದು ದೂಡಿ, ಗುರುದಾಸ ಇವರ ಮಗ ಸೂರಜ್ ಗುರುದಾಸ ಬಾನಾವಳಿಕರಗೂ ದೂಡಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಸಚಿನ್‌ ಅಸ್ನೋಟಿಕರ್‌ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಂಕೋಲಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.