Dandeli| ‘ಕ್ಯಾ ಕರತೆ ಕರೋ ತುಮಿ…!’ ಎಂದು ಪೋಲಿಸ್‌ನ ಎದುರೇ ಕೂಗಾಡಿದ ಯುವಕನ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೇ ದಾಂಡೇಲಿಯ ದಿನೇಶ ರಾಜಾರಾಮ ಪವಾರ (26) ಎಂಬುವವನೇ ಪೋಲಿಸ್ ಸಿಬ್ಬಂದಿಗೇ ಆವಾಜ್ ಹಾಕಿದ ವ್ಯಕ್ತಿ. ನಗರದ ಸೋಮಾನಿ ಸರ್ಕಲ್‌ನಲ್ಲಿ ವ್ಯಕ್ತಿಯೊಬ್ಬ ಕರ್ಕಶ ಶಬ್ದ ಮಾಡುತ್ತಾ ಕೆಟಿಎಂ ಬೈಕ್ ಚಲಾಯಿಸುತ್ತಿದ್ದಾನೆ ಎಂದು ಸಾರ್ವಜನಿಕರು ಪೋಲಿಸ್ ಠಾಣೆಗೆ ದೂರಿದ್ದಾರೆ. ಆಗ ಪಿಎಸ್ಸೈ, ಬ್ರೀತ್ ಅನಲೈಸರ್ ತೆಗೆದುಕೊಂಡು ಆ ಸ್ಥಳಕ್ಕೆ ಹೋಗುವಂತೆ ಪೋಲಿಸ್ ಸಿಬ್ಬಂದಿಗೆ ಸೂಚಿಸಿದ್ದಾನೆ. ಅವರ ಸೂಚನೆಯಂತೆ ಸ್ಥಳಕ್ಕೆ ತೆರಳಿದ ಪೋಲಿಸ್ ಸಿಬ್ಬಂದಿ, ಆರೋಪಿ ದಿನೇಶ ಪವಾರ್ ಗೆ ಬ್ರೀಥ ಅನಲೈಜರನಲ್ಲಿ ಊದಲು ಹೇಳಿದಾಗ, ಆಪಾದಿತ ತಾನು ಊದುವದಿಲ್ಲ ತಾನೇಕೆ ಊದಬೇಕು… ತಾನು ಸರಾಯಿ ಕುಡಿದಿರುತ್ತೇನೆ.. ತಾನು ಊದುವದಿಲ್ಲ… ಎಂದು ಎದುರುತ್ತರ ನೀಡಿದ್ದಾನೆ. ಆಗ ಪೋಲಿಸ್ ಸಿಬ್ಬಂದಿಯು ಆತನಿಗೆ ಇಲ್ಲಿ ಹೆಣ್ಣು ಮಕ್ಕಳು ಹಾಗೂ ಜನರು ಓಡಾಡುವ ಪ್ರದೇಶ. ನೀನು ಸರಾಯಿ ಕುಡಿದಿದ್ದಿಯಾ ಸಾರ್ವಜನಿಕರಿಗೆ ತೊಂದರೆ ಕೊಡಬೇಡ ಎಂದು ಬುದ್ದಿಮಾತು ಹೇಳಿದ್ದಾರೆ.
ಪೋಲಿಸ್ ಸಿಬ್ಬಂದಿಯ ಬುದ್ದಿಮಾತಿಗೆ ಜಗ್ಗದ ಆರೋಪಿ ದಿನೇಶ್ ಪವಾರ್, ‘ಒಳಗೆ ಹಾಕುತ್ತೀರಾ? ಹಾಕಿ… ನನಗೂ ಹಾಕಿ, ಗಾಡಿಗೂ ಹಾಕಿ… ನಾನು ಒಂದು ವರ್ಷ ಜೈಲಿನಲ್ಲಿ ಇದ್ದು ಬಂದಿದ್ದೇನೆ” ಎಂದು ಅವರಿಗೆ ಸವಾಲು ಹಾಕಿದ್ದಾನೆ. ಅಲ್ಲದೇ ‘ಏ ವಿಡಿಯೋ ಕರಬೆ ತು….. ಅಂತಾ ತನ್ನ ಒಬ್ಬ ವ್ಯಕ್ತಿಗೆ ಹೇಳಿದ್ದಾನೆ. ಕ್ಯಾ ಕರತೆ ಕರೋ ತುಮಿ…ಎಂದು ಪೋಲಿಸರ ಎದುರೇ ತೊಡೆ ತಟ್ಟಿದ್ದಾನೆ. ಆಗ ಅಲ್ಲಿದ್ದ ಸಾರ್ವಜನಿಕರು ಆತನಿಗೆ ಸಮಾದಾನ ಮಾಡಲು ಹೋದಾಗ ಅವರಿಗೆ ಚೂ* ಮಾರಕೆ ಬಚ್ಚೆ… ಎಂದು ಬೈದಿದ್ದಾನೆ. ನಂತರ ತನ್ನ ಮೊಬೈಲ್ ನಿಂದ ತಾನೇ ವಿಡೀಯೋ ಮಾಡುತ್ತಾ, ಪೋಲಿಸ್‌ಗೆ ‘ಏನು ಮಾಡ್ತಿಯಾ’ ಎಂದು ಹೀಯಾಳಿಕೆ ರೀತಿಯಲ್ಲಿ ಸವಾಲು ಹಾಕಿದ್ದಾನೆ. ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಆರೋಪಿ ಮೇಲೆ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಹಳಿಯಾಳದಲ್ಲಿ ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿ ರೌಡಿ ಶೀಟರ್ ಒಬ್ಬ ಪೊಲೀಸರ ಎದುರೇ ದರ್ಪ ಮೆರೆದರೂ, ಕೈಕಟ್ಟಿ ಕುಳಿತ ಪಿಸ್ಸೈ ಪ್ರಕರಣವನ್ನು ನೆನಪಿಸುವಂತಿತ್ತು. ಘಟನೆಯ ಬಗ್ಗೆ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಿದಾಗ, ತಾನು ಸ್ವತಃ ತೆರಳದೇ ಸಿಬ್ಬಂದಿಗಳಿಗೆ ಮೊದಲು ಕಳುಹಿಸಿ ‘ಬಿಸೊ ದೊಣ್ಣೆ ತಪ್ಪಿಸಿಕೊಂಡ ಪಿಸ್ಸೈ ವರ್ತನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದ ಪೋಲಿಸ್ ಸಿಬ್ಬಂದಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
