Karwar| ಕೆಡಿಪಿ ಸಭೆಯಿಂದ ಶಾಸಕ ಸೈಲ್ ‘ವಾಕ್ ಔಟ್’ ಮಾಡಿದ ವಿಷಯ ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ, ಶಾಸಕ ಸತೀಶ್ ಸೈಲ್ ಹಾಗೂ ಉಸ್ತುವಾರಿ ಸಚಿವ ವೈದ್ಯ ನಡುವಿನ ಆಟ – ಎದಿರೇಟು ಮುಂದುವರೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಕಳೆದ ಸೋಮವಾರ ಕಾರವಾರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಡಾಕ್ಟರ್ ಹಾಗೂ ಔಷಧ ಸ್ಟಾಕ್ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಸಿಟ್ಟಿಗೆದ್ದ ಸೈಲ್ ‘ತಾನು ಅಂಗುಟಾ ಛಾಪ್ ಅಲ್ಲ’ ಎಂದು ಕೆಡಿಪಿ ಸಭೆಯಿಂದ ಹೊರನಡೆದಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ ತಾಲೂಕಿನಲ್ಲಿನಲ್ಲಿರುವ ಡಾಕ್ಟರ್, ಔಷಧಿ ಸಂಗ್ರಹ ಇತ್ಯಾದಿ ಬಗ್ಗೆ ಪ್ರತಿ ತಾಲೂಕುಗಳಲ್ಲಿ ತಾಲೂಕಾ ಮಟ್ಟದ ಆರೋಗ್ಯ ರಕ್ಷಣಾ ಸಮಿತಿ ಇರುತ್ತದೆ. ಅದಕ್ಕೆ ಸ್ಥಳೀಯ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಇವುಗಳನ್ನು ಅಲ್ಲಿಯೂ ಚರ್ಚೆ ಮಾಡಬಹುದು ಎಂದು ಸೈಲ್ ಗೆ ಸಚಿವ ವೈದ್ಯ ಕಾಲೆಳೆದಿದ್ದರು.

ದರೆ ಈಗ ಸರದಿ ಸೈಲ್ ಅವರದ್ದಾಗಿದ್ದು, ಉಸ್ತುವಾರಿ ಸಚಿವರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ  ಗುರುವಾರ ನಾಲ್ಕು ಸಾಲಿನ ಪತ್ರವೊಂದನ್ನು ಬರೆಯಿಸಿ,  ‘ಕಾರವಾರ ತಾಲೂಕು ಜಿಲ್ಲಾ ಕೇಂದ್ರವಾಗಿರುವುದರಿಂದ ಈ ಮೊದಲಿದ್ದ ಜಿಲ್ಲಾ ಆಸ್ಪತ್ರೆಯು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ  ವಿಲೀನಗೊಂಡಿದೆ. ಹೀಗಾಗಿ ಕಾರವಾರದಲ್ಲಿ  ಯಾವುದೇ ತಾಲೂಕು ಆಸ್ಪತ್ರೆ ಇಲ್ಲದೇ ಇರುವುದರಿಂದ ತಾಲೂಕಾ ಮಟ್ಟದ ಆರೋಗ್ಯ ರಕ್ಷಾ ಸಮಿತಿ ಇರುವುದಿಲ್ಲ’ ಎಂದು  ಉಸ್ತುವಾರಿ ಸಚಿವ ವೈದ್ಯಗೆ ‘ಸಮರಕ್ಕೂ  ಸಿದ್ದ’ ಎಂಬ ಸಂದೇಶ ಕಳಿಸಿ, ಅವರನ್ನ ಚೆಕ್ ಮೆಟ್ ಮಾಡಿದ್ದಾರೆ.