ಮೈಸೂರು: ಗಾನಕೋಗಿಲೆ ಎಸ್.ಜಾನಕಿ‌‌ (88) ಇಲ್ಲಿನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.‌ ಹಿನ್ನೆಲೆ ಗಾಯನದಲ್ಲಿ ದೇಶದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಖ್ಯಾತ ಗಾಯಕಿ‌ ಎಸ್ ಜನಾಕಿ ನಿಧನರಾಗಿದ್ದಾರೆ.

ಕನ್ನಡ, ತಮಿಳು, ತೆಲಗು, ಮಳಯಾಳಂ ಹಾಗೂ ಹಿಂದಿ ಸೇರಿದಂತೆ 48 ಸಾವಿರಕ್ಕೂ ಹೆಚ್ಚು ಹಾಡಿಗೆ‌ ಹಿನ್ನಲೆ ಗಾಯನ ಹಾಡಿದ್ದ ಗಾನ ಕೋಗಿಲೆ ಈಗ ಗಾನ ನಿಲ್ಲಿಸಿದ್ದಾರೆ.

ಎಸ್ ಜಾನಕಿ ಭಾರತ ಹಾಗೂ ವಿದೇಶಿ ಭಾಷೆಗಳು ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಯಲ್ಲಿ ಹಾಡಿದ್ದ ಎಸ್ ಜಾನಕಿ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗಾಯಕಿ‌ ಎಸ್. ಜಾನಕಿ ಚಿಕಿತ್ಸೆ ಫಕಾರಿಯಾಗದೇ ನಿಧನಹೊಂದಿದ್ದಾರೆ.