ಭರ್ಜರಿ ದಾಳಿಯಲ್ಲಿ ಸಿಕ್ಕಿದ್ದು ನೈಂಟಿ ಎಂಎಲ್ ಮದ್ಯ ಮಾತ್ರ…!
Sirsi| ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೆ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಒಬ್ಬ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ತಾಲೂಕಿನ ಗಣೇಶ ನಗರ ಪುಟ್ಟನಮನೆ ನಿವಾಸಿ ರವಿಕಿರಣ ತಂದೆ ಗಿರಿರಾಜ ದೇಸಳ್ಳಿ (26) ಎಂದು ಗುರುತಿಸಲಾಗಿದೆ. ಜೂನ್ 27ರಂದು ಬೆಳಿಗ್ಗೆ ಸುಮಾರು 11.30 ಗಂಟೆಗೆ ಶಿರಸಿ ನಗರದ ಲಿಂಗದಕೋಣ ಕಡೆಗೆ ಹೋಗುವ ಸಾರ್ವಜನಿಕ ಕಚ್ಚಾ ರಸ್ತೆಯ ಬದಿಯಲ್ಲಿ ಆರೋಪಿಯು ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಪಿ.ಎಸ್.ಐ ನರಸಿಂಹಲು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.
ಆದರೆ ಪೋಲಿಸರ ಭರ್ಜರಿ ದಾಳಿಯ ವೇಳೆ ಐವತ್ತು ರೂಪಾಯಿ ಮೌಲ್ಯದ 90 ML ಬೆಂಗಳೂರು ವಿಸ್ಕಿಯ ಒಂದು ಪಾಕೇಟ್, 90 ml ನ ಬೆಂಗಳೂರು ವಿಸ್ಕಿಯ ಖಾಲಿ ಮದ್ಯದ ಪ್ಯಾಕೇಟ್, ಎರಡು ಗ್ಲಾಸ್ ಗಳು, 500 ML ನ ಖಾಲಿ ನೀರಿನ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
