ತುಮಕೂರು: ಅಂಕೋಲಾದ ಪಾಗಲ್ ಪ್ರೇಮಿಯೊಬ್ಬ ಕಾರಿನಲ್ಲಿ ಕಚ್ಚಾ ಬಾಂಬ್ ಸ್ಟೋಟಿಸಿ ಮೃತ ಪಟ್ಟ ವಿಚಿತ್ರ ಘಟನೆ ತುಮಕೂರಿನ ಜೋಗಿಹಳ್ಳಿ ಬಳಿ ನಡೆದಿದೆ‌.

ಅಂಕೋಲಾ ತಾಲೂಕಿನ ನಾಗೇಂದ್ರ ಹಾಗೂ ರಮ್ಯಾ ಎಂಬ ಹುಡುಗಿ ಕೆಲ ವರ್ಷಗಳಿಂದ ಪ್ರಿತಿಸುತ್ತಿದ್ದು ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್ ನಲ್ಲಿ ಇದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನ ಸಂಜಿವ ಗಾಂಧಿ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಮ್ಯಾಳ ಜೊತೆ ನಾಗೇಂದ್ರ ಕಳೆದ ಆರು ವರ್ಷದಿಂದ ಪ್ರಿತಿಸುತ್ತಿದ್ದ.

ಕಳೆದ ಕೆಲ ತಿಂಗಳಿಂದ ಪ್ರೇಮಿಗಳ ನಡುವೆ ವೈಮನಸ್ಸು ಮೂಡಿತ್ತು. ಇಂದು ಬೆಂಗಳೂರಿನಿಂದ ಅಂಕೋಲಾಕ್ಕೆ ಕಾರಿನಲ್ಲಿ ಹೊರಟಿದ್ದ ಪ್ರೇಮಿಗಳು ದಾರಿ ಮದ್ಯೆ ಜಗಳವಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದ್ದು ತನ್ನ ಪ್ರೇಯಸಿ ರಮ್ಯಾಳಿಗೆ ಪ್ರಿಯಕರ ನಾಗೇಂದ್ರ ಚಾಕು ಇರಿದಿದ್ದಾನೆ.

ಪ್ರಿಯಕರನ ವ್ಯಗ್ರ ವರ್ತನೆಗೆ ಬೆದರಿದ ರಮ್ಯಾ ಚಲಿಸಿತ್ತಿದ್ದ ಕಾರಿನಿಂದ ಜಿಗಿದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ಪ್ರೇಯಸಿಗೆ ಬೆದರಿಸಲು ತಂದಿದ್ದ ನಾಡಬಾಂಬ್ ಕಾರಿನಲ್ಲೇ ಸ್ಪೋಟಗೊಂಡಿದ್ದು ಅಂಕೋಲಾ ಮೂಲದ ಪ್ರಿಯಕರ ನಾಗೇಂದ್ರ ಕಾರಿನಲ್ಲೇ ಸುಟ್ಟು ಭಸ್ಮವಾಗಿದ್ದಾನೆ.

ಸ್ಥಳಕ್ಕೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನು ಚಲಿಸುತ್ತಿದ್ದ ಕಾರಿನಿಂದ ಜಿಗಿದಿದ್ದ ರಮ್ಯಾಳಿಗೂ ಗಂಭೀರ ಗಾಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.