Karwar| ನಗರದ ಗುತ್ತಿಬೀರ ದೇವಸ್ಥಾನದ ಸಮೀಪದ ಇಸ್ಪಿಟ್ ಅಡ್ಡೆ ಮೇಲೆ ಕಾರವಾರ ಶಹರ ಠಾಣೆ ಪೋಲಿಸರು ದಾಳಿ ನಡೆಸಿ, ಇಲ್ಲಿನ ನಗರಸಭೆಯ ಸಿಬ್ಬಂದಿ ಸೇರಿ ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಕೋಣೆವಾಡದ ವಿಠ್ಠಲ ಕೇಮು ಹರಿಕಂತ್ರ, ಹೋಟೆಗಾಳಿಯ ಅನೀಲ ಕಾಶೀನಾಥ ಕಾಂಬ್ಳೆ, ಮಾಜಾಳಿಯ ಸಂತೋಷ ರಾಮಚಂದ್ರ ಚಂಡೇಕರ ಹಾಗೂ ಕಾರವಾರ ನಗರಸಭೆಯ ಸಿಬ್ಬಂದಿ ನಿಲೇಶ ಮಹಾದೇವ ಅರಗೇಕರ ಸೇರಿದಂತೆ ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಜೂನ್.13ರಂದು ರಾತ್ರಿ 8.30 ರ ಸುಮಾರಿಗೆ ಇಲ್ಲಿನ ಗುತ್ತಿಬೀರ ದೇವಸ್ಥಾನದ ಬಳಿಯಿರುವ ದೀಲಿಪ ದಳವಿ ಮನೆಯ ಹತ್ತಿರದ ಶೇಡ್ ನಲ್ಲಿಆರೋಪಿಗಳು ಅಂದರ್ ಬಾಹರ್ ಆಡುತ್ತಿದ್ದರು. ಆಗ ಖಚಿತ ಮಾಹಿತಿ ಮೇರೆಗೆ ಪಿಎಸ್ಸೈ ಉದ್ದಪ್ಪ ಧರೇಪ್ಪನವರ ಪೋಲಿಸರೊಂದಿಗೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಂದರ್ ಬಾಹರ ಆಟಕ್ಕೆ ಬಳಸಿದ 5830 ರೂಪಾಯಿ, ಇಸ್ಪೀಟ್ ಕಾರ್ಡ ಹಾಗೂ ಇನ್ನಿತರ ವಸ್ತುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಕಾರವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
