Honavar| ಮಂಗನಿಗೆ ಓಡಿಸಲು ಏರ್ ಗನ್‌ನಿಂದ ಹಾರಿಸಿದ ಗುಂಡು ಆಕಸ್ಮಿಕವಾಗಿ ಆತನಿಗೇ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ಗೇರುಸೊಪ್ಪ ಸಮೀಪದ ಹಾಡಗೇರಿ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಸುಬ್ರಹ್ಮಣ್ಯ ಮಂಜ ಮರಾಠಿ (18) ಮೃತಪಟ್ಟ ಯುವಕ. ಮಂಗಗಳನ್ನು ಓಡಿಸಲು ಏರ್ ಗನ್ ತೆಗೆದುಕೊಂಡು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.
ಆಕಸ್ಮಿಕವಾಗಿ ಏರ್ ಗನ್‌ನಿಂದ ಗುಂಡು ಸಿಡಿದು ಎದೆಗೆ ತಗುಲಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
